ನೋಡು ಗೆಳತಿ ಏನಾಗಿದೆ ಈ ನಾಡು.
ಎಲ್ಲಿ ಕಳೆದು ಹೋಯಿತೋ
ನಾವಿಬ್ಬರೂ ಕಟ್ಟಿದ ಕನಸಿನ ಗೂಡು....?
ಕಳೆದ ಹೇಮಂತದಲಿ ಕಂಡ ಸ್ವರ್ಗವದೆಲ್ಲಿ?
ಶಿಶಿರ-ವಸಂತಗಳ ಬೆರಗು ನೋಟಗಳೆಲ್ಲಿ?
ಎತ್ತ ಕಣ್ಣು ಹರಿಸಿದರೂ ಹಸಿರು ದುಪ್ಪಟ ಹೊದಿಕೆ,
ತುಂಬಿ ತುಳುಕುವ ಕೆರೆಯ, ಸುಭೀಕ್ಷ ತಾಣವದೆಲ್ಲಿ?
ರೆಕ್ಕೆಗಳು ನೋಯುತ್ತಿವೆ ಅಲೆದಲೆದು ಸುತ್ತಾ,
ವನಗಳನು ಕಬಳಿಸಿವೆ ಬರಿಯ ಗೋಡೆಗಳು;
ಬತ್ತಿ ಹೋಗಿವೆಯಲ್ಲ ಕೆರೆ-ತೊರೆಗಳೆಲ್ಲಾ!
ಯಾರು ಇರಬಹುದು ಈ ನಿರ್ವನದೊಳೆಲ್ಲ?
ಮರಗಳನು ಬುಡದಿಂದ ಕಿತ್ತು ತಿಂದಿಹರೋ?
ಕೆರೆ-ತೊರೆಯ ಜಲ ಹೀರಿ ತೇಗಿ ಮಲಗಿಹರೋ?
ವಲಸೆ ಬಂದ ಹಕ್ಕಿಗಳ ಅಳಲು ಮೂಲ ನಿವಾಸಿಗಳಾದ ನಮ್ಮದೂನು ಗೆಳೆಯ! ಕಾಂಕ್ರಟೀಕರಣ ಮತ್ತು ನೀರ ಬತ್ತುವ ನಿರಂತರ ಆಕ್ರಮಣದಿಂದಾಗಿ ಮುಂದೊಂದು ದಿನ ನೆಲ ಬಂಜೆಯಾಗುವ ಅಪಾಯವಿದೆ.
ReplyDeleteಸಾಮಾಜಿಕ ಕಳಕಳಿಯ ಈ ರಚನೆ, ತನ್ನ ಪದ ಲಾಲಿತ್ಯದಿಂದ ಮತ್ತು ಭಾವಾಂತರಣದಿಂದ ನನ್ನ ಮನ ಗೆದ್ದಿತು.
ನನ್ನ ಬ್ಲಾಗಿಗೂ ಬನ್ನಿರಿ:
www.badari-poems.blogspot.com
www.badari-notes.blogspot.com